ⓘ ದೊಡ್ಡರಂಗೇಗೌಡ. ಡಾ|| ದೊಡ್ಡರಂಗೇಗೌಡ ರು ಕನ್ನಡದ ಕವಿ, ಸಾಹಿತಿ, ಪ್ರಾಧ್ಯಾಪಕರು ಮತ್ತು ಚಲನಚಿತ್ರ ಸಾಹಿತಿಗಳು. ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ೮೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಮ ..

                                     

ⓘ ದೊಡ್ಡರಂಗೇಗೌಡ

ಡಾ|| ದೊಡ್ಡರಂಗೇಗೌಡ ರು ಕನ್ನಡದ ಕವಿ, ಸಾಹಿತಿ, ಪ್ರಾಧ್ಯಾಪಕರು ಮತ್ತು ಚಲನಚಿತ್ರ ಸಾಹಿತಿಗಳು. ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ೮೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಮನುಜ ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದಾರೆ. ಚಲನಚಿತ್ರ ಗೀತಸಾಹಿತ್ಯಕ್ಕೆ ಹೆಸರಾಗಿದ್ದಾರೆ. ಗ್ರಾಮೀಣ ಸೊಗಡಿನ ಗೀತ ಸಾಹಿತ್ಯವು ಇವರ ಸಾಹಿತ್ಯದ ಗುರುತಾಗಿದೆ. ಕನ್ನಡ ಪ್ರಗಾಥಗಳ ಸಾಮ್ರಾಟ್ ಎಂದೂ ಪ್ರಸಿದ್ಧಿಯಾಗಿದ್ದಾರೆ.

                                     

1. ಜೀವನ

ಇವರು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕುರುಬರಹಳ್ಳಿಯಲ್ಲಿ 0೭ ಫೆಬ್ರುವರಿ ೧೯೪೬ರಲ್ಲಿ ಜನಿಸಿದರು.ತಂದೆ ಶ್ರೀ ಕೆ. ರಂಗೇಗೌಡರು,ತಾಯಿ ಶ್ರೀಮತಿ ಅಕ್ಕಮ್ಮ. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಮದ್ರಾಸ್ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದರು. ಇವರು ಕನ್ನಡ ನವೋದಯ ಕಾವ್ಯ- ಒಂದು ಪುನರ್ ಮೌಲ್ಯಮಾಪನ ಎಂಬ ವಿಷಯದ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಪಿಹೆಚ್‍ಡಿಡಾಕ್ಟರೇಟ್ ಪದವಿ ದೊರಕಿತು.

೧೯೭೨ರಿಂದ ೨೦೦೪ರವರೆಗೂ ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆ ಬಳಿ ಇರುವ ಎಸ್.ಎಲ್.ಎನ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ.

೨೦೦೮ ರಿಂದ ೨೦೧೪ ರ ವರೆಗೆ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿದ್ದರು.

೨೦೨೧ರ ೮೬ನೇ ಹಾವೇರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.

                                     

2. ಸಾಹಿತ್ಯ ಕೃಷಿ

ದೊಡ್ಡರಂಗೇಗೌಡರು ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ೮೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಮನುಜ ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದಾರೆ. ೪೭ಕ್ಕೂ ಅಧಿಕ ಪ್ರಗಾಥodeಗಳನ್ನು ರಚಿಸಿರುವ ಅವರು ಕನ್ನಡ ಪ್ರಗಾಥಗಳ ಸಾಮ್ರಾಟ್ ಎಂದೂ ಪ್ರಸಿದ್ಧಿಯಾಗಿದ್ದಾರೆ.

ಕವನ‌ ಸಂಕಲನಗಳು

 • ಕುದಿಯುವ ಕುಲುಮೆ ‌
 • ಚದುರಂಗಗ ಕುದುರೆಗಳು
 • ಹೊಸಹೊನಲು
 • ಯುಗವಾಣಿ
 • ಬದುಕು ತೋರಿದ ಬೆಳಕು
 • ಕಣ್ಣು ನಾಲಿಗೆ ಕಡಲು ಕಾವ್ಯ
 • ಗೆಯ್ಮೆ
 • ಜಗುಲಿ ಹತ್ತಿ ಇಳಿದು
 • ನಿಕ್ಷೇಪ
 • ಅವತಾರ ಐಸಿರಿ
 • ಏಳು ಬೀಳಿನ ಹಾದಿ
 • ನಾಡಾಡಿ
 • ಮೌನ‌ ಸ್ಪಂದನ
 • ಲೋಕಾಯಣ

ಭಾವಗೀತೆಗಳು

 • ಕಾವ್ಯ-ಕಾವೇರಿ
 • ಮಾವು-ಬೇವು
 • ಅಂತರಂಗದ ಹೂ ಬನ
 • ಪ್ರೇಮ ಪಯಣ
 • ನಲ್ಮೆ ನೇಸರ

ಗದ್ಯ ಕೃತಿಗಳು

 • ವಿಚಾರ ವಾಹಿನಿ
 • ವಿಶ್ವ ಮುಖಿ
 • ದಾರಿ ದೀಪಗಳು
 • ವರ್ತಮಾನದ ವ್ಯಂಗ್ಯದಲ್ಲಿ
                                     

3. ಚಿತ್ರರಂಗದಲ್ಲಿ

ದೊಡ್ಡರಂಗೇಗೌಡರು ಮಾಗಿಯ ಕನಸು ಚಿತ್ರದಲ್ಲಿ ನಟಿಸಿದ್ದಾರೆ. ಹಾರುವ ಹಂಸಗಳುʼ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. ಹತ್ತು ಸಿನೆಮಾಗಳಿಗೆ ಸಂಭಾಷಣೆ ಬರೆದಿದ್ದಾರೆ. ದೊಡ್ಡರಂಗೇಗೌಡರು ಚಲನಚಿತ್ರ ಗೀತಸಾಹಿತ್ಯಕ್ಕೆ ಹೆಸರಾಗಿದ್ದಾರೆ. ಸುಮಾರು ೬೦೦ ಚಲನಚಿತ್ರ ಗೀತೆಗಳನ್ನು ಬರೆದಿದ್ದಾರೆ. ಗ್ರಾಮೀಣ ಸೊಗಡಿನ ಗೀತ ಸಾಹಿತ್ಯವು ಇವರ ಸಾಹಿತ್ಯದ ಗುರುತಾಗಿದೆ.

ಚಲನಚಿತ್ರ ಗೀತಸಾಹಿತ್ಯ

 • ರಂಗನಾಯಕಿ
 • ರಮ್ಯ ಚೈತ್ರಕಾಲ
 • ಮುದುಡಿದ ತಾವರೆ ಅರಳಿತು
 • ಹೃದಯಗೀತೆ
 • ಸಾಧನೆ ಶಿಖರ
 • ಭೂಲೋಕದಲ್ಲಿ ಯಮರಾಜ
 • ಕುರುಬನ ರಾಣಿ
 • ಏಳು ಸುತ್ತಿನ ಕೋಟೆ
 • ತಂದೆಗೆ ತಕ್ಕ ಮಗ
 • ಅರುಣರಾಗ
 • ಅಶ್ವಮೇಧ
 • ಜನುಮದ ಜೋಡಿ
 • ಪಡುವಾರಳ್ಳಿ ಪಾಂಡವರು
 • ಅನುಪಮ
 • ಆಲೆಮನೆ
 • ಪರಸಂಗದ ಗೆಂಡೆತಿಮ್ಮ
                                     

4. ಪ್ರಶಸ್ತಿ/ಪುರಸ್ಕಾರಗಳು

 • ರಾಜ್ಯೋತ್ಸವ ಪ್ರಶಸ್ತಿ
 • ೨೦೨೧ರ ೮೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ
 • ಪದ್ಮಶ್ರೀ ಪ್ರಶಸ್ತಿ - ೨೦೧೮
 • ನಾಲ್ಕು ಬಾರಿ ಉತ್ತಮ ಗೀತರಚನೆಗೆ ರಾಜ್ಯ ಪ್ರಶಸ್ತಿ
 • ಕಣ್ಣು ನಾಲಿಗೆ ಕಡಲು ಕಾವ್ಯ - ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೭೨.
 • ೧೯೮೨ರಲ್ಲಿ ಗೌಡರು ಆಲೆಮನೆ ಚಿತ್ರಕ್ಕಾಗಿ ಬರೆದ ಭಾವೈಕ್ಯ ಗೀತೆಗೆ ಸರ್ಕಾರದಿಂದ ವಿಶೇಷ ಗೀತೆ ಪ್ರಶಸ್ತಿ ಹಾಗೂ ಬೆಳ್ಳಿ ಪದಕದೊಂದಿಗೆ ಸನ್ಮಾನ ದೊರೆಯಿತು. ವಿಶೇಷ ಗೀತೆ ಪ್ರಶಸ್ತಿ ಪಡೆದ ಮೊದಲ ಸಾಹಿತಿ ಇವರು.
 • ಪ್ರೀತಿ ಪ್ರಗಾಥ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ರತ್ನಾಕರವರ್ಣಿ-ಮುದ್ದಣ ಕಾವ್ಯ ಪ್ರಶಸ್ತಿ ೧೯೯೦
                                     
 • ಆಹ ವ ನ ಸಲ ಯ ತ ನವ ಬರ - ಬಜ ಜ ಆಟ ಅಸ ತ ತ ವಕ ಕ ಬರ ತ ತದ ಕವ ಹ ಗ ಚ ತ ರಸ ಹ ತ ದ ಡ ಡರ ಗ ಗ ಡ ಅವರ ತ ಮಕ ರ ಜ ಲ ಲ ಯ ಕ ರ ಬರಹಳ ಳ ಯಲ ಲ ಜನ ಸ ದರ ಮ - ಕನ ನಡ ಮತ ತ ತ ಳ
 • ಕವ - ಕ ವ ಪ ನ ಸರ ನ ಡ ಹವ ಯ ಸ ರ ಗಭ ಮ ಯ ರ ಗಗ ತ ಗಳ ಮ ವ ಬ ವ ಡ ದ ಡ ಡರ ಗ ಗ ಡ ಸ ಅಶ ವಥ ರವರ ಅ ತರಜ ಲ ಪ ಟ C. Ashwath resigns from shishunala shariff
 • ಕ ಮ ರ ಅವರ ಸ ಗ ತ ನ ರ ದ ಶನದಲ ಲ ಗ ತ ಗಳನ ನ ಚ ಉದಯಶ ಕರ ಆರ ಎನ ಜಯಗ ಪ ಲ ದ ಡ ಡರ ಗ ಗ ಡ ಅವರ ಗಳ ಬರ ದ ದ ದ ರ ಎಸ ಪ ಬ ಲಸ ಬ ರಹ ಮಣ ಯ ಮತ ತ ಚ ತ ರ ಇವರ ಹ ಡ ದ ನ
 • ಹ ಪ ಹ ಳ ಶ ರ ಮತ ಸ ಧ ಯ ಶ ರ ಮಧ ಕರ ಕ ಲ ಕಣ ಶ ರ ಮತ ನ ಮ ಲ ಮ ತ ಯ ಜಯ. ದ ಡ ಡರ ಗ ಗ ಡ ಇವರ ತಮ ಮ ವ ಮಶ ಯಲ ಲ ಈ ಕವ ಗಳ ಹ ದಯ ತ ಬ ಹ ಡ ತ ತ ಬ ದವರ ಎ ದ ಬಣ ಣ ಸ ದ ದ ರ
 • ಮ ಡಲ ಗ ದ ಹ ದ ಮ ಲ ನ ನ ಯಮಕ ಕ ಅನ ಗ ಣವ ಗ ಡ ವ ಜ , ಚ ದ ರಶ ಖರ ಕ ಬ ರ, ದ ಡ ಡರ ಗ ಗ ಡ ಸ ದ ಧಲ ಗಯ ಯ ಮ ತ ದ ಸ ಹ ತ ಗಳ ಮ ಲ ಮನ ಸದಸ ಯರ ಗ ದ ದರ ಎಚ ನರಸ ಹಯ ಯ
 • ಹ ಡ ಗಳ ಸ ಹ ತ ಯವನ ನ ಹ ಸಲ ಖ, ಶ ಯ ಮಸ ದರ ಕ ಲಕರ ಣ ಕ ಕಲ ಯ ಣ ಇಟಗ ಈರಣ ಣ, ದ ಡ ಡರ ಗ ಗ ಡ ಮತ ತ ಆರ ಎನ ಜಯಗ ಪ ಲ ಬರ ದರ ಧ ವನ ಸ ರ ಳ ಸ ಗ ರಹದಲ ಲ ಎ ಟ ಹ ಡ ಗಳ ದ ದ
 • ಭ ಷಣ: ಡ ಎ ವ ರಪ ಪ ಮ ಯ ಲ ಮ ಜ ಕ ದ ರ ಸಚ ವರ ಡ ಯ ಮಹ ಶ ವರ ಪ ರ ದ ಡ ಡರ ಗ ಗ ಡ ಶ ರ ಮತ ವ ದ ಹ ಶ ರ ಬ ಆರ ಲಕ ಷಣರ ವ ಶ ರ ಸ ಬ ರ ಯ ಚ ಕ ಕ ಡ ಶ ರ ಎಚ
 • ಜಬ ಟ ರ ಅವರನ ನ ಮ ದ ವರ ಸಲ ಗ ದ ಇನ ನ ಬ ಜ ಪ ಯ ಎಸ ಆರ ಲ ಲ ಡ ದ ಡ ಡರ ಗ ಗ ಡ ಎ ಆರ ದ ರ ಸ ವ ಮ ಹ ಗ ಬ ಬ ಶ ವಪ ಪ ಅವರ ಸ ಥ ನಗಳ ಗ ಉಳ ದ ನ ಲ ವರನ ನ
 • ಶ ಮಸ ದರ ಬ ದರಕ ದ ಜಗಲ ಹತ ತ ಇಳ ದ ಕಣ ಣ ನ ಲಗ ಕಡಲ ನ ಡ ಡ ಸ ಕಲನಗಳ ದ ಡ ಡರ ಗ ಗ ಡ ಇಲ ಲದ ದ ಇನ ನ ದರ ಬದ ಕಬ ಕ ಸ ಕಲನಗಳ ಜಯಸ ದರ ಶನ, ತ ಡ ಗ ಯ.ಎಚ ಎಸ ಭ ಮನಗ ಡರ
 • ಸಮ ರ ಭದಲ ಲ ಹ ರ ತ ದ ಸ ಭ ವನ ಗ ರ ಥ. ಕವ ಗಳ ದ ಪ ರ ಕ ಎಸ ನ ಸ ರ ಅಹಮದ ಡ ದ ಡ ಡರ ಗ ಗ ಡ ನ ವ ತ ತ ಐ.ಎ.ಎಸ ಅಧ ಕ ರ ಕ ಜ ರ ಜ ಲ ಖಕರ ದ ಜ ಣಗ ರ ವ ಕಟರ ಮಯ ಯ, ನ ರ ಯಣ
 • ಚ ದ ರಶ ಖರ ಪ ಟ ಲ ಜನವರ ಧ ರವ ಡ ಚ ದ ರಶ ಖರ ಕ ಬ ರ ಫ ಬ ರವರ ಕಲಬ ರಗ ಎಚ ಎಸ ವ ಕಟ ಶಮ ರ ತ - ಹ ವ ರ ದ ಡ ಡರ ಗ ಗ ಡ ನ ಯ ಜ ತ ಅಧ ಯಕ ಷ