ⓘ ಬಜಾರ್, 2019 ಚಲನಚಿತ್ರ. ಬಜಾರ್ ಭಾರತದ ಕನ್ನಡ ಭಾಷೆಯ ಸುನಿ ನಿರ್ದೇಶನದ ಭಾರತಿ ಫಿಲಂ ಪ್ರೊಡಕ್ಷನ್ ಅಡಿಯಲ್ಲಿ ತಿಮ್ಮೇಗೌಡ ನಿರ್ಮಿಸಿರುವ ಆಕ್ಷನ್ ಕ್ರೈಮ್ ಚಲನಚಿತ್ರ. ಈ ಚಿತ್ರದಲ್ಲಿ ಹೊಸ ಪರಿಚಯ ..

                                     

ⓘ ಬಜಾರ್ (2019 ಚಲನಚಿತ್ರ)

ಬಜಾರ್ ಭಾರತದ ಕನ್ನಡ ಭಾಷೆಯ ಸುನಿ ನಿರ್ದೇಶನದ ಭಾರತಿ ಫಿಲಂ ಪ್ರೊಡಕ್ಷನ್ ಅಡಿಯಲ್ಲಿ ತಿಮ್ಮೇಗೌಡ ನಿರ್ಮಿಸಿರುವ ಆಕ್ಷನ್ ಕ್ರೈಮ್ ಚಲನಚಿತ್ರ. ಈ ಚಿತ್ರದಲ್ಲಿ ಹೊಸ ಪರಿಚಯ ಧನ್ವೀರ್ ಗೌಡ ಮತ್ತು ಆಧಿತಿ ಪ್ರಭುದೇವ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸಾಧು ಕೋಕಿಲ, ಶರತ್ ಲೋಹಿತಾಶ್ವ ಮತ್ತು ಅರುಣಾ ಬಾಲರಾಜ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಕಥಾವಸ್ತುವು ಪಾರಿವಾಳ ಓಟದಲ್ಲಿ ಒಳಗೊಂಡಿರುವ ಜೂಜಿನ ಪ್ರಕ್ರಿಯೆಯ ಬಗ್ಗೆ ಹೇಳುತ್ತದೆ. ಈ ಚಿತ್ರವನ್ನು ಪಾರಿವಾಳ ರೇಸ್ ನಡೆಯುವ ಬೆಂಗಳೂರು, ಮೈಸೂರು ಮತ್ತು ತುಮಕೂರಿನಂತ ನೈಜ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ.

ಚಿತ್ರದ ತಾಂತ್ರಿಕ ಸಿಬ್ಬಂದಿಗಳಲ್ಲಿ ಸಂಗೀತ ಸಂಯೋಜಕರಾಗಿ ರವಿ ಬಸ್ರೂರ್, ಛಾಯಾಗ್ರಾಹಕರಾಗಿ ಸಂತೋಷ್ ರೈ ಪತಂಜೆ, ಸಂಕಲನಕಾರರಾಗಿ ಅಭಿಷೇಕ್ ಇದ್ದಾರೆ. ಆರಂಭದಲ್ಲಿ ಸಂಕ್ರಾಂತಿ ಹಬ್ಬದ ದಿನದಂದು ಬಿಡುಗಡೆ ಮಾಡಲು ಯೋಜಿಸಲಾಗಿತ್ತು, ಆದರೆ ನಂತರ ಬಿಡುಗಡೆಯನ್ನು 1 ಫೆಬ್ರವರಿ 2019 ಕ್ಕೆ ಮುಂದೂಡಿದರು.

                                     

1. ಕಥಾವಸ್ತು

ಕಲ್ಕಿ ಯಾವಾಗಲೂ ಪಾರಿವಾಳ ರೇಸರ್ ಆಗಬೇಕೆಂದು ಕನಸು ಕಾಣುತ್ತಾನೆ. ಅವನು ಪರಿಳನ್ನು ಪ್ರೀತಿಸುತ್ತಾನೆ. ಪರಿ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವಳು, ಫ್ಯಾಶನ್ ಡಿಸೈನರ್ ಆಗಿ ಕೆಲಸ ಮಾಡುತ್ತಿರುತ್ತಾಳೆ. ಕಲ್ಕಿ ಗ್ಯಾಂಗ್ಸ್ಟರ್ ಕುಟುಂಬದಿಂದ ಬಂದವನು. ಇಬ್ಬರೂ ಪ್ರೀತಿಯಲ್ಲಿ ಬಿದ್ದಾಗ ಅವರ ಜೀವನವು ಹೇಗೆ ಬದಲಾಗುತ್ತದೆ ಎಂಬುದೇ ಚಿತ್ರದ ಕಥಾವಸ್ತು.

                                     

2. ಪಾತ್ರವರ್ಗ

  • ಜುಮಾಂಜಿ ಪಾತ್ರದಲ್ಲಿ ಸಾಧು ಕೋಕಿಲ
  • ಪಾರಿಜಾತ/ಪರಿ ಪಾತ್ರದಲ್ಲಿ ಅಧಿತಿ ಪ್ರಭುದೇವ
  • ಕಲ್ಕಿ ಪತ್ರದಲ್ಲಿ ಧನವೀರ್ ಗೌಡ
  • ಯಜಮಾನ್ ಪಾತ್ರದಲ್ಲಿ ಶರತ್ ಲೋಹಿತಾಶ್ವ
  • ಮಂಜುನಾಥ ಹೆಗಡೆ
  • ಅರುಣಾ ಬಾಲರಾಜ್
  • ಹಂಪ ಕುಮಾರ್ ಅಂಗಡಿ
                                     

3. ಧ್ವನಿಪಥ

ರವಿ ಬಸ್ರೂರ್ ಚಿತ್ರಕ್ಕಾಗಿ ಧ್ವನಿಪಥ ಮತ್ತು ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ. ಒಟ್ಟು ಮೂರು ಹಾಡುಗಳನ್ನು ಅವರು ಸಂಯೋಜಿಸಿದ್ದಾರೆ. ನಟ ದರ್ಶನ್ ಅವರು ಆನಂದ ಆಡಿಯೊ ಲೇಬಲ್ ಅಡಿಯಲ್ಲಿ ಆಡಿಯೋವನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.

                                     
  • ಮ ಯ ಜ ಕ - ಭ ತಯ ಯನ ಮ ಮ ಮಗ ಅಯ ಯ - ಸ ಹ ರ - ಕ ಜ ಎಫ ಅಧ ಯ ಯ 1 - ಬಜ ರ - ರ ಜಣ ಣನ ಮಗ - ಮ ರ ಶಲ - ಗ ರ ಮ ಟ - ಗರ ಗರ ಮ ಡಲ - ಬ ಲ ಡರ