ⓘ ಸೀತಾರಾಮ ಕಲ್ಯಾಣ, ೨೦೧೯ರ ಚಲನಚಿತ್ರ. ಸೀತಾರಾಮ ಕಲ್ಯಾಣ 2019 ರ ಶ್ರೀರಾಮ್ ರವರು ಬರೆದು ನಿರ್ದೇಶಿಸಿರುವ ಕನ್ನಡ ಭಾಷೆಯ ಚಲನಚಿತ್ರ. ಈ ಚಿತ್ರವನ್ನು ನಿರಂಜನರವರು ಚನ್ನಾಂಬಿಕ ಫಿಲ್ಮ್ಸ್ ಅಡಿಯಲ್ಲ ..

                                     

ⓘ ಸೀತಾರಾಮ ಕಲ್ಯಾಣ (೨೦೧೯ರ ಚಲನಚಿತ್ರ)

ಸೀತಾರಾಮ ಕಲ್ಯಾಣ 2019 ರ ಶ್ರೀರಾಮ್ ರವರು ಬರೆದು ನಿರ್ದೇಶಿಸಿರುವ ಕನ್ನಡ ಭಾಷೆಯ ಚಲನಚಿತ್ರ. ಈ ಚಿತ್ರವನ್ನು ನಿರಂಜನರವರು ಚನ್ನಾಂಬಿಕ ಫಿಲ್ಮ್ಸ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಬಹು ತಾರಾಂಗಣವನ್ನು ಹೊಂದಿರುವ ಈ ಚಿತ್ರದಲ್ಲಿ ನಿಖಿಲ್ ಕುಮಾರ್ ಮತ್ತು ರಚಿತಾ ರಾಮ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಆರ್. ಶರತ್‌ಕುಮಾರ್, ಮಾಧು, ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿರುವ ಬಾಲಿವುಡ್ ನಟ ಸಂಜಯ್ ಕಪೂರ್, ಭಾಗ್ಯಶ್ರೀ, ಆದಿತ್ಯ ಮೆನನ್, ಪಿ. ರವಿಶಂಕರ್, ಚಿಕ್ಕಣ್ಣ, ಸಾಧು ಕೋಕಿಲ ಇದ್ದಾರೆ.

ಚಿತ್ರದ ತಾಂತ್ರಿಕ ಸಿಬ್ಬಂದಿಗಳಲ್ಲಿ ಸಂಗೀತ ಸಂಯೋಜಕರಾಗಿ ಅನುಪ್ ರುಬೆನ್ಸ್, ಛಾಯಾಗ್ರಾಹಕರಾಗಿ ಸ್ವಾಮಿ.ಜೆ, ಸಂಕಲನಕಾರರಾಗಿ ಗಣೇಶ್ ಮತ್ತು ಸಾಹಸ ನಿರ್ದೇಶಕರಾಗಿ ರಾಮ್-ಲಕ್ಷ್ಮಣ್.

ಗಣರಾಜ್ಯೋತ್ಸವದ ದಿನ ರಜಾದಿನ 25 ಜನವರಿ 2019 ರಂದು ಈ ಚಿತ್ರವು ಬಿಡುಗಡೆಯಾಯಿತು. ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕುಗಳನ್ನು ₹ 5.5 ಕೋಟಿಗೆ ಮಾರಾಟ ಮಾಡಲಾಗಿದೆ ಎಂದು ವರದಿಯಾಗಿತ್ತು. ಈ ಚಿತ್ರವು ರಂಡೋಯ್ ವೇದಿಕ ಚೂಸ್ದಾಮ್ ಚಿತ್ರದ ಅನಧಿಕೃತ ರಿಮೇಕ್ ಆಗಿದೆ.

                                     

1. ಪಾತ್ರವರ್ಗ

 • ಚಿಕ್ಕಣ್ಣ
 • ನರಸಿಂಹನ ಪಾತ್ರದಲ್ಲಿ ಪಿ ರವಿಶಂಕರ್, ಗೀತಾಳ ತಂದೆ.
 • ಗೀತಾ ಪಾತ್ರದಲ್ಲಿ ರಚಿತಾ ರಾಮ್
 • ಆರ್ಯ ಪಾತ್ರದಲ್ಲಿ ನಿಖಿಲ್ ಕುಮಾರ್
 • ಶಿವರಾಜ್ ಕೆ.ಆರ್.ಪೇಟೆ
 • ಶಂಕರ್ ಪಾತ್ರದಲ್ಲಿ ಆರ್.ಶರತ್‌ ಕುಮಾರ್
 • ಮೀರಾ ಪಾತ್ರದಲ್ಲಿ ಭಾಗ್ಯಶ್ರೀ, ನರಸಿಂಹನ ಸಹೋದರಿ
 • ನಯನ
 • ಗೀತಾ ತಾಯಿಯಾಗಿ ಮಾಧು
 • ವಿಶ್ವ ಪಾತ್ರದಲ್ಲಿ ಆದಿತ್ಯ ಮೆನನ್
 • ಗಿರಿಜಾ ಲೋಕೇಶ್
 • ಮೀರಾ ಅವರ ಪತಿ ಡಾ.ಶಂಕರ್ ಪಾತ್ರದಲ್ಲಿ ಸಂಜಯ್ ಕಪೂರ್
                                     

2. ಧ್ವನಿಪಥ

ಅನುಪ್ ರುಬೆನ್ಸ್ ಚಿತ್ರಕ್ಕಾಗಿ ಧ್ವನಿಪಥ ಮತ್ತು ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ. ಒಟ್ಟು ಮೂರು ಹಾಡುಗಳನ್ನು ಅವರು ಸಂಯೋಜಿಸಿದ್ದಾರೆ. ಆಡಿಯೊವನ್ನು ಲಹಾರಿ ಮ್ಯೂಸಿಕ್ ಆಡಿಯೊ ಲೇಬಲ್ ಅಡಿಯಲ್ಲಿ ಬಿಡುಗಡೆ ಮಾಡಲಾಯಿತು. "ನಿನ್ನ ರಾಜ ನಾನು" ಹಾಡನ್ನು 16 ನವೆಂಬರ್ 2018 ರಂದು ಬಿಡುಗಡೆಯಾಯಿತು.

                                     

3. ಮಾರ್ಕೆಟಿಂಗ್

ಚಿತ್ರದ ಟೀಸರ್ 31 ಜುಲೈ 2018 ರಂದು ಬಿಡುಗಡೆಯಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸಂಖ್ಯೆಯ ವೀಕ್ಷಣೆಗಳನ್ನು ದಾಖಲಿಸಿತ್ತು. ಟೀಸರ್ ಬಿಡುಗಡೆಯ ನಂತರ ಕೆಲ ಸಾಹಸ ಸನ್ನಿವೇಶಗಳು ತೆಲುಗಿನ ಸರ್ರೈನೋಡು ಚಿತ್ರವನ್ನು ಹೋಲುತ್ತವೆ ಎಂಬ ಕಾರಣಕ್ಕೆ ಈ ಚಿತ್ರವು ತೆಲುಗಿನ ಸರ್ರೈನೋಡು ಚಿತ್ರದ ರಿಮೇಕ್ ಎಂದು ಊಹಿಸಲಾಗಿತ್ತು.

ಚಿತ್ರದ ಅಧಿಕೃತ ಟ್ರೈಲರ್ ಅನ್ನು 19 ಜನವರಿ 2019 ರಂದು ಪ್ರದರ್ಶಿಸಲಾಯಿತು.