ⓘ ೯೯, 2019 ಚಲನಚಿತ್ರ. ೯೯ 2019 ರ ಕನ್ನಡ ಭಾಷೆಯ ಚಲನಚಿತ್ರ, ಪ್ರೀತಂ ಗುಬ್ಬಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ ಮತ್ತು ರಾಮುರವರು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಗಣೇಶ್ ಮತ್ತು ಭಾವನ ಮುಖ್ ..

                                     

ⓘ ೯೯ (2019 ಚಲನಚಿತ್ರ)

೯೯ 2019 ರ ಕನ್ನಡ ಭಾಷೆಯ ಚಲನಚಿತ್ರ, ಪ್ರೀತಂ ಗುಬ್ಬಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ ಮತ್ತು ರಾಮುರವರು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಗಣೇಶ್ ಮತ್ತು ಭಾವನ ಮುಖ್ಯ ಪಾತ್ರದಲ್ಲಿದ್ದಾರೆ. ಈ ಚಿತ್ರವು 1 ಮೇ 2019 ರಂದು ಬಿಡುಗಡೆಯಾಯಿತು. ಇದು 2018 ರ ತಮಿಳು ಚಿತ್ರ 96 ನ ರಿಮೇಕ್ ಆಗಿದೆ.

                                     

1. ಪಾತ್ರವರ್ಗ

 • ರಾಮ್ ಆಗಿ ಗಣೇಶ್
 • ಹೇಮಂತ್ - ಕಿರಿಯ ರಾಮ್ ಆಗಿ
 • ಸಮಿಕ್ಷಾ- ಕಿರಿಯ ಜಾನು ಆಗಿ
 • ಜಾನು ಪಾತ್ರದಲ್ಲಿ ಭಾವನಾ
 • ಅಮೃತ ರಾಮಮೂರ್ತಿ
 • ಚಂದ್ರಹಾಸ್ ಉಲ್ಲಾಳ್
 • ಪ್ರಣಯ ಮೂರ್ತಿ
 • ರವಿಶಂಕರ್ ಗೌಡ
 • ಪಿ.ಡಿ ಸತೀಶ್ ಚಂದ್ರ
 • ಜ್ಯೋತಿ ರೈ
 • ಪ್ರಕಾಶ್ ತುಮಿನಾಡ್
 • ಶಮಂತ್ ಶೆಟ್ಟಿ
                                     

2. ನಿರ್ಮಾಣ

೯೯, ತಮಿಳು ಚಿತ್ರ 96 2018 ನ ರೀಮೇಕ್ ಅನ್ನು ಪ್ರೀತಮ್ ಗುಬ್ಬಿ ನಿರ್ದೇಶಿಸಿದ್ದಾರೆ, ಇದು ಅವರು ನಿರ್ದೇಶಿಸಿದ ಮೊದಲ ರೀಮೇಕ್ ಚಿತ್ರವಾಗಿದೆ.ಇದನ್ನು ರಾಮುರವರು ರಾಮು ಫಿಲ್ಮ್ಸ್ ಅಡಿಯಲ್ಲಿ ನಿರ್ಮಿಸಿದ್ದಾರೆ ಮತ್ತು ಸಂತೋಷ್ ರೈ ಪತಂಜೆ ಅವರ ಛಾಯಾಗ್ರಹಣವಿದೆ. 1999 ರಲ್ಲಿ ಕಾಲೇಜಿನಲ್ಲಿದ್ದಾಗ ಗಣೇಶ್ ರವರೊಂದಿಗೆ ಪ್ರೀತಂಗುಬ್ಬಿ ರವರ ಸ್ನೇಹ ಪ್ರಾರಂಭವಾದ ಕಾರಣ ಚಿತ್ರಕ್ಕೆ 99 ಎಂದು ಹೆಸರಿಡಲಾಯಿತು. ಗುಬ್ಬಿ ಮತ್ತು ಗಣೇಶ್ ರವರು ಜೋಡಿಯಾದರೆ ಯಶಸ್ಸು ಖಚಿತ ಎಂದು ಭಾವಿಸಿ ಭಾವನಾರವರು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರು. ಚಿತ್ರದ ಮೊದಲ ಹಂತದ ಚಿತ್ರೀಕರಣ ಪುತ್ತೂರಿನಲ್ಲಿ ನಡೆಯಿತು.

                                     

3. ಧ್ವನಿಪಥ

ಧ್ವನಿಪಥವನ್ನು ಅರ್ಜುನ್ ಜನ್ಯ ಸಂಯೋಜಿಸಿದ್ದಾರೆ. ಇದು ಅವರ 100 ನೇ ಧ್ವನಿಪಥವಾಗಲಿದೆ. ಆಡಿಯೊ ಹಕ್ಕುಗಳನ್ನು ಆನಂದ್ ಆಡಿಯೊಗೆ ₹ 5 ಮಿಲಿಯನ್ ಗೆ ಮಾರಾಟ ಮಾಡಲಾಯಿತು. "ಹೀಗೆ ದೂರ" ಹಾಡನ್ನು 4 ಮಾರ್ಚ್ 2019 ರಂದು ಬಿಡುಗಡೆ ಮಾಡಲಾಯಿತು.

                                     
 • ಅ ಬರ ಶ ಕನ ನಡ ಚಲನಚ ತ ರಗಳಲ ಲ ಪ ರಧ ನವ ಗ ನಟ ಸ ದ ಭ ರತ ಯ ಚಲನಚ ತ ರ ನಟ. ಕನ ನಡ ಜ ತ ಗ ಅವರ ತಮ ಳ ಮಲಯ ಳ ತ ಲ ಗ ಮತ ತ ಹ ದ ಚಲನಚ ತ ರಗಳಲ ಲ ಅಭ ನಯ ಸ ದ ದ ರ
 • ಭ ಗವ ಗ ತ ತ 1940 ರ ದಶಕದಲ ಲ ದಕ ಷ ಣ ಭ ರತದ ಸ ನ ಮ ಸ ಮ ರ ಅರ ಧದಷ ಟ ಭ ರತ ಯ ಚಲನಚ ತ ರ ಮ ದ ರಗಳನ ನ ಹ ದ ತ ತ 2009 ರಲ ಲ ದಕ ಷ ಣ ಭ ರತವ ಭ ರತದಲ ಲ ಚಲನಚ ತ ರದ ಆದ ಯದ