ⓘ ರಾಜರಥ, ಚಲನಚಿತ್ರ. ರಾಜರಥ, ತೆಲುಗಿನಲ್ಲಿ ರಾಜರಥಂ ೨೦೧೮ ರ ಭಾರತೀಯ ಕನ್ನಡ ಭಾಷೆಯ ಚಿತ್ರ. ಅನೂಪ್ ಭಂಡಾರಿ ಅವರು ಚಿತ್ರವನ್ನು ನಿರ್ದೇಶಿಸಿದ್ದಾರೆ ಹಾಗೂ ಸಂಗೀತವನ್ನು ನೀಡಿದ್ದಾರೆ. ಚಿತ್ರದ ಮುಖ ..

                                     

ⓘ ರಾಜರಥ (ಚಲನಚಿತ್ರ)

ರಾಜರಥ, ತೆಲುಗಿನಲ್ಲಿ ರಾಜರಥಂ ೨೦೧೮ ರ ಭಾರತೀಯ ಕನ್ನಡ ಭಾಷೆಯ ಚಿತ್ರ. ಅನೂಪ್ ಭಂಡಾರಿ ಅವರು ಚಿತ್ರವನ್ನು ನಿರ್ದೇಶಿಸಿದ್ದಾರೆ ಹಾಗೂ ಸಂಗೀತವನ್ನು ನೀಡಿದ್ದಾರೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಿರೂಪ್ ಭಂಡಾರಿ ಮತ್ತು ಅವಂತಿಕಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ರಂಗಿತರಂಗ ಚಿತ್ರದ ನಂತರ ಎರಡನೇ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ತೆಲುಗಿನಲ್ಲಿ ರಾಣಾ ದಗ್ಗುಬಾಟಿ ಚಿತ್ರದ ನಿರೂಪಣೆ ಮಾಡಿದ್ದಾರೆ. ಕನ್ನಡದಲ್ಲಿ ಮೊದಲ ಬಾರಿಗೆ ತಮಿಳು ನಟ ಆರ್ಯ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಪಿ. ರವಿಶಂಕರ್ ಮತ್ತು ಶೃತಿ ಹರಿಹರನ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಲಿಯಮ್ ಡೇವಿಡ್ ಚಿತ್ರಕ್ಕೆ ಛಾಯಗ್ರಹಣ ಮಾಡಿದ್ದಾರೆ.

ಚಿತ್ರವು ಮಾರ್ಚ್ ೨೩,೨೦೧೮ ರಂದು ರಾಜ್ಯಾದ್ಯಂತ ಬಿಡುಗಡೆಯಾಯಿತು. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.